ಬಡತನ ಶಾಪವಲ್ಲ. ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಯೋಚನೆ, ಕಠಿಣ ಪರಿಶ್ರಮ, ಸಾಧಿಸುವ ಛಲ ಹಾಗು ಶೃದ್ದೆಯಿಂದ ಕೆಲಸಮಾಡಿದರೆ ಬಡತದಿಂದ ಹೊರಬರಲು ಸಾಧ್ಯ . ಗುಡಿಸಲಿನಿಂದ ಶ್ವೇತ ಭವನ ಗೆ ಹೋದವರು, ಚಾ ಮಾರುವವರು ಪ್ರಧಾನಮಂತ್ರಿ ಆದ ಮಹಾನ ಸಾಧಕರು ನಮಗೆ ಮಾದರಿ. - ನಾಗೇಶ್ ತಳೇಕರ್
ಸಜ್ಜನರ ಸಂಗದಲ್ಲಿಇರುವದೆಂದರೆ ಒಂದು ಸುಗಂಧ ಅಂಗಡಿಯಲ್ಲಿ ಪ್ರವೇಶಿಸಿದಂತೆ....ಸುಗಂಧ ಖರೀದಿಸಿ ಅಥವಾ ಖರೀದಿಸದಿರಿ, ತೇಲಿಬರುವ ಸುಗಂಧ ದ್ರವ್ಯಗಳ ಸುವಾಸನೆ ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸುವುದು ಮಾತ್ರ ನಿಜ . - ನಾಗೇಶ್ ತಳೇಕರ್
ವಿಜ್ಞಾನಿಗಳಿಗೆ ಚಂದ್ರ ಮತ್ತು ಮಂಗಳ ಗ್ರಹದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲ ಹೆಚ್ಚಾಗಿದೆ. ಮಹಾನಗರದಲ್ಲಿ ಜನರಿಗೆ ತಮ್ಮ ಪಕ್ಕದಮನೆಯಲ್ಲಿ ವಾಸವಾಗಿರುವರ ಬಗ್ಗೆ ತಿಳಿಯುವ ಕುತೂಹಲ ಇಲ್ಲವಾಗಿದೆ. . - ನಾಗೇಶ್ ತಳೇಕರ್ .
ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ. ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಬೇಕು. - ನಾಗೇಶ್ ತಳೇಕರ್
ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮನ ದಲ್ಲಿ ಇದ್ದರೆ ಸಾಲದು , ಅದು ಮನೆಯಲ್ಲಿ ಬೆಳೆಯಬೇಕು. ಮಕ್ಕಳು ಅಪ್ಪ,ಅಮ್ಮ ,ಅಕ್ಕ,ಅಣ್ಣ,ತಮ್ಮ , ತಂಗಿ , ಅಜ್ಜ , ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ಮಾವ , ಅತ್ತೆ, ಅತ್ತಿಗೆ,ನಾದಿನಿ ಮುಂತಾದ ಕುಟುಂಬದ ಸದಸ್ಯರ ಸಂಬಂಧವನ್ನು ಗುರುತಿಸುವ ಅಪ್ಪಟ ಕನ್ನಡ ಶಬ್ದಗಳನ್ನು ಬಳಸಬೇಕು . - ನಾಗೇಶ್ ತಳೇಕರ್